-
ಕೆರೆ ಸಂರಕ್ಷಣಾ ಕೇಂದ್ರ

ಕೆರೆಗಳು ಪರಿಸರದ ಅಮೂಲ್ಯಜಲರಾಶಿಗಳು. ಈ ಅಮೂಲ್ಯ ಸಾಂಪ್ರದಾಯಿಕ ಜಲರಾಶಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದೆ. ನಗರಾಭಿವೃದ್ಧಿ ಮತ್ತು ಕೈಗಾರಿಕೆಯಿಂದ, ಒತ್ತುವರಿ ಮತ್ತು ಇತರೆ ಕಾರಣಗಳಿಂದ ಬಹುಪಾಲು ಕೆರೆಗಳು ಆರಂಭದ ಅಸ್ಥಿತ್ವವನ್ನು ಕಳೆದುಕೊಂಡಿರುತ್ತವೆ. ಕೆರೆಗಳನ್ನು ಪುನಶ್ಚೆತನಕ್ಕೆ ತರುವುದು ಒಂದು ಸವಾಲಿನ ಕಾರ್ಯವಾಗಿರುತ್ತದೆ. ಈ ಕೇಂದ್ರವು ರಾಜ್ಯದಲ್ಲಿನ ಜಲರಾಶಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಿರ್ವಹಣೆಯಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳುತ್ತಿದೆ. ಜಲರಾಶಿಗಳ ಸುಧಾರಣೆಗಾಗಿ ಸಂರಕ್ಷಣೆ ಮತ್ತು ನಿರ್ವಹಣೆಗಳ ಕ್ರಿಯಾಯೋಜನೆಗಳನ್ನು ನಿರ್ಮಿಸುವುದಕ್ಕೆ ಪಾಲುದಾರರ ಮತ್ತು ನೀತಿದಾರರ ನಡುವೆ ಸಂಪರ್ಕ ಸೇತುವೆಯನ್ನು ಕಲ್ಪಿಸುವ ಕಾರ್ಯವನ್ನು ಸಹಾ ಕೇಂದ್ರವು ಮಾಡುತ್ತಿದೆ. ಕೆರೆ ಸಂರಕ್ಷಣಾ ಕೇಂದ್ರವು ಇಲ್ಲಿವರೆಗೆ ಐದು ಅಧ್ಯಯನವನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಒಂದು ಅಧ್ಯಯನವು ಪ್ರಗತಿಯಲ್ಲಿದೆ. ಈ ವಿವರಗಳನ್ನು ಕೆಳಗೆ ನೀಡಲಾಗಿದೆ.

ಪೂರ್ಣಗೊಂಡ ಅಧ್ಯಯನಗಳು:

1. ಕರ್ನಾಟಕದಲ್ಲಿನ ಪ್ರಮುಖ ಕೆರೆಗಳ ಸಂರಕ್ಷಣಾ ಕಾರ್ಯತಂತ್ರಗಳು - ಬೆಂಗಳೂರು ಹಂತ ೧.

2. ಬೆಂಗಳೂರಿನ ನೀರಿನ ಸುರಕ್ಷತಾ ಯೋಜನೆಗಳು - ನೀರು ಸರಬರಾಜು ಮಾಡಲು ಒಂದು ಗುಣಾತ್ಮಕ ಮಾರ್ಗ (ವಾರ್ಡ್ ಸಂಖ್ಯೆ ೯೦ (ಹಲಸೂರ) ಮತ್ತು ವಾರ್ಡ್ ಸಂಖ್ಯೆ ೯೧ (ಭಾರತೀನಗರ).

3. ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಸಂರಕ್ಷಣೆ

4. ಮೈಸೂರು ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಕೆರೆಗಳ ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳು.

5. ಕರ್ನಾಟಕದಲ್ಲಿನ ಕಾವೇರಿ ನದಿಯ ಎರಡು ಕಡೆಯ ೩೦೦ ಮೀ. ತಟಸ್ಥ ವಲಯದಲ್ಲಿನ ಪ್ರಸ್ತುತ ಸ್ಥಿತಿ.

6. ಬೆಂಗಳೂರು ಮಹಾನಗರ ಪ್ರದೇಶದಲ್ಲಿನ ಜಲಕಾಯಗಳು (ಕೆರೆ, ಕಟ್ಟೆ ಮತ್ತು ಕುಂಟೆ)

7. ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶದಲ್ಲಿನ ಜಲಕಾಯಗಳ (ಕೆರೆ, ಕಟ್ಟೆ ಮತ್ತು ಕುಂಟೆ) ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳು.

ಪ್ರಗತಿಯಲ್ಲಿರುವ ಅಧ್ಯಯನಗಳು:


1. ಎತ್ತಿನಹೊಳೆ ಯೋಜನಾ ಕ್ಷೇತ್ರಗಳ ದಾಖಲೀಕರಣ ಹಾಗೂ ಬಹು ಯೋಜನೆಗಳಿಂದಾಗಿ ಅರಣ್ಯ ಭೂಪ್ರದೇಶದ ಮೇಲೆ ಉಂಟಾಗುವ ಸಂಚಿತ ಪರಿಣಾಮಗಳ ಮೌಲ್ಯಮಾಪನ ಕುರಿತು ಅಧ್ಯಯನ;

2. ತುಮಕೂರು ಹಾಗೂ ಕೋಲಾರ ಮಹಾನಗರ ಪಾಲಿಕೆ ಹಾಗೂ ಪುರಸಭೆಗಳ ಪ್ರದೇಶದಲ್ಲಿನ ಜಲರಾಶಿಗಳ ಮೌಲ್ಯಮಾಪನ ಕುರಿತು ಅಧ್ಯಯನ.

 

             

×
ABOUT DULT ORGANISATIONAL STRUCTURE PROJECTS