-
ಗ್ರಂಥಾಲಯ

 

ಎಂಪ್ರಿ ಗ್ರಂಥಾಲಯವು ಮಾಹಿತಿ ಸಂಪನ್ಮೂಲ ಕೇಂದ್ರದಡಿಯಲ್ಲಿರುವ ಉದ್ಯೋಗಿಗಳಿಗೆ ಸುಸಜ್ಜಿತವಾದ ಮಾಹಿತಿ  ಸೇವೆಯನ್ನು ಒದಗಿಸುತ್ತಿದೇ. ಗ್ರಂಥಾಲಯವು ೪೦೦೦ ಕ್ಕೂ ಅಧಿಕ ಮಾಹಿತಿ ಸಂಪನ್ಮೂಲಗಳ ವಿಶೇಷ ಸಂಗ್ರಹವನ್ನು ಹೊಂಧಿದ್ಧೋ ಇವುಗಳಲ್ಲಿ ಪುಸ್ತಕಗಳು, ಉಲ್ಲೇಖ ಸಂಪನ್ಮೂಲಗಳು ವರಧಿಗಳು ಮತ್ತು ಪರಿಸರ ವಿಜ್ಞಾನ ಸಂಭಧಿತ ವಿಭಾಗಗಳ ಕುರಿತು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಿವೆ. ಪ್ರಸ್ತುತ ಉಲ್ಲೇಖ ಮತ್ತು ಜಾಗೃತಿ ಸೇವೆಗಳನ್ನು ವಿಸ್ತರಿಸುವುಧು ಮತ್ತು ಬಳಕೆಧಾರರಿಗೆ ಮಾಹಿತಿ ಬೆಂಬಲವನ್ನು ಒದಗಿಸುವುದು ಎಂಪ್ರಿ ಗ್ರಂಥಾಲಯಧ ಮುಖ್ಯ ಉದ್ಧೇಶವಾಗಿರುತದೇ.

 

ನಿಯಮಿತ ಅವಧಿಗೆ ಲಭ್ಯವಿರುವ ಪುಸ್ತಕಗಳ ಮತ್ತು ನಿಯತಕಾಲಿಕೆಗಳ ಹೊರತಾಗಿ ಗ್ರಂಥಾಲಯವು ಸುದ್ಧಿ ಪತ್ರಗಳು, ವಾರ್ಷಿಕ ವರಧಿಗಳು, ನಕ್ಷೆಗಳನ್ನು ಸಹ ಹೊಂಧಿರುತದೆ. ಎಂಪ್ರಿ ಗ್ರಂಥಾಲಯದಲ್ಲಿ ವಿಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂಧಿಗೆ ಮಾಹಿತಿಯನ್ನು ಗುರುತಿಸುವ, ಮೌಲ್ಯಮಾಪನ ಮಾಡುವ, ಆಯ್ಕೆ ಮಾಡುವ, ಸಂಸ್ಕರಿಸುವ, ಹಿಂಪಡೆಯುವ ಮತ್ತು ಪ್ರಸಾರ ಮಾಡುವ ಮೂಲಕ ಸಂಗ್ರಹಣೆಯ ಅಭಿವೃದ್ಧಿಯನ್ನು ನಿರ್ಮಿಸುವಲ್ಲಿ ವ್ಯವಸ್ಥಿತ ಪ್ರಯತ್ನವನ್ನು ಮಾಡಲಾಗುತ್ತಿದೆ.

 

ಧ್ಯೇಯ ಮತ್ತು ಉದ್ಧೇಶಗಳು : ಸಂಸ್ಥೆಯ ದೃಷ್ಟಿ ಮತ್ತು ದ್ಯೇಯಕ್ಕೆ ಅನುಗುಣವಾಗಿ ಪರಿಣಾಮಕಾರಿ ಪ್ರಸರಣದ ಮೂಲಕ ಜ್ಞಾನ ಉತ್ಪಾಧನೆಯನ್ನು  ಉತ್ತೇಜಿಸಲು ಗ್ರಂಥಾಲಯವನ್ನು ಸ್ಥಾಪಿಸಲಾಗಿಧೆ. ಗ್ರಂಥಾಲಯವು ಸಂಸ್ಥೆಯ ಮುಖ್ಯ ಕಲಿಕಾ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತಿದೆ ಮತ್ತು ಸಂಸ್ಥೆಯ ತರಬೇತಿ, ಸಂಶೋಧನೆ ಮತ್ತು ಸಲಹಾ ಕಾರ್ಯಕ್ರಮಗಳ ಅವಶ್ಯಕತೆಳನ್ನು ಪೂರೈಸಲು ಸೇವೆಗಳು ಮತ್ತು ಸಂಶೋಧಕರನ್ನು ಓಧಗಿಸುತ್ತದೆ

 

ಗ್ರಂಥಾಲಯದ ಮುಖ್ಯ ಉದ್ದೇಶಗಳು:

 

 

ಗ್ರಂಥಾಲಯದ ಸಂಪನ್ಮೂಲಗಳು:

 

ಪುಸ್ತಕಗಳು: ವರದಿಗಳು, ಯಶೋಗಾಥೆಗಳು ಮತ್ತು ಯೋಜನೆಗಳನ್ನೊಳಗೊಂಡ ಒಟ್ಟು 4೦೦೦ಕ್ಕೂಅಧಿಕ ಪುಸ್ತಕಗಳಿವೆ.

 

ಗ್ರಂಥಾಲಯದ ಯಾಂತ್ರೀಕರಣ:

 

ಗ್ರಂಥಾಲಯದ ಯಾಂತ್ರೀಕರಣ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಙಾನಗಳು Information and Communications Technologies (ICT)  ಮಾನವ ಚಾಲಿತ ವ್ಯವಸ್ಥೆಗಳನ್ನು ಬದಲಾಯಿಸಲು ಬಳಸುವ ಸಾಮಾನ್ಯ ಪದವಾಗಿದೆ.

EMPRI ಗ್ರಂಥಾಲಯದಲ್ಲಿ, ಗ್ರಂಥಾಲಯ ಯಾಂತ್ರೀಕರಣಕ್ಕಾಗಿ ಹಾಗೂ ಗ್ರಂಥಾಲಯದಲ್ಲಿ ಲಭ್ಯವಿರುವ ದಾಖಲೆಗಳಿಗೆ ವಿದ್ಯುನ್ಮಾನ ಸ್ಪರ್ಶ ಕೊಡಲು KOHA open source software (OSS) ಬಳಸಲಾಗುತ್ತಿದೆ.

ಗ್ರಂಥಾಲಯವು ಈಗಾಗಲೇ ೪೦೦೦ ಕ್ಕಿಂತ ಹೆಚ್ಚಿನ ಸಂಖ್ಯೆಯ ಪುಸ್ತಕಗಳು (ಪಠ್ಯ ಪುಸ್ತಕಗಳು ಮತ್ತು ರೆಫರೆನ್ಸ್ ಪುಸ್ತಕಗಳು ಎರಡೂ ಒಳಗೊಂಡಂತೆ), ವರದಿಗಳು ಇತ್ಯಾದಿ. ಎಲ್ಲವುಗಳನ್ನು ನಮ್ಮ ಗ್ರಂಥಾಲಯದ http://192.168.1.95 ಮೂಲಕ ನೋಡಬಹುದು ಮತ್ತು ಪಡೆಯಬಹುದು.

ಗ್ರಂಥಾಲಯದ Online Public Access Catalogue  ಇದು ಅಂತರ್ಜಾಲದ ಒಂದು ನೇರ ಸಾಧನವಾಗಿದೆ, ಬಳಕೆದಾರರಿಗೆ ಪ್ರಸ್ತುತ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು/ಗ್ರಂಥಗಳನ್ನು ಮತ್ತು ಇತರೆ ಸಂಪನ್ಮೂಲ ವಸ್ತುಗಳನ್ನು ಹುಡುಕಲು ನಂತರ ಗುರುತಿಸಲು ಸುಗಮಗೊಳಿಸುತ್ತದೆ.

 

 

ಸಬ್ ಸ್ಕ್ರಿಪ್ಷನ್:

 

ಎಂಪ್ರಿ ಸಂಸ್ಥೆಯು indiastat.com ಗೆ ಸಬ್ಸ್ಕ್ರೈಬ್ ಆಗಿದ್ದು, ಇದು ಭಾರತದ ಅತ್ಯಂತ ಸಮಗ್ರ ಇ-ಸಂಪನ್ಮೂಲವಾಗಿದೆ, 31 ಡೇಟಾ ವಿಭಾಗಗಳು ಮತ್ತು ಅವುಗಳ ಉಪ-ವರ್ಗಗಳ  ಸಾಮಾಜಿಕ-ಆರ್ಥಿಕ ಅಂಕಿಅಂಶಗಳ ವೈಶಿಷ್ಟ್ಯಗಳೊಂದಿಗೆ, ನಿರ್ದಿಷ್ಟ ವರ್ಷ, ವಿಭಾಗ, ರಾಜ್ಯ ಅಥವಾ ಪ್ರದೇಶಕ್ಕಾಗಿ ಡೇಟಾವನ್ನು ಪಡೆಯಲು ಫಿಲ್ಟರ್‌ಗಳನ್ನು ಅನ್ವಯಿಸುವ ಮೂಲಕ ಡೇಟಾ ಹುಡುಕಾಟ ಮಾಡಬಹುದಾಗಿದೆ ಹಾಗೂ MS-Excel/word ನಲ್ಲಿ ಸುಲಭವಾಗಿ ವೀಕ್ಷಿಸಿ, ಮುದ್ರಿಸಿ  ಮತ್ತು ಡೌನ್‌ಲೋಡ್ ಮಾಡಬಹುದಾದ ಬಳಕೆದಾರ ಸ್ನೇಹಿ ಸ್ವರೂಪ ಮತ್ತು ಸಾಂದ್ರೀಕೃತ ಡೇಟಾದೊಂದಿಗೆ ಸುಲಭ ಸಂಚರಣೆ ಮಾಡಬಹುದಾಗಿದೆ.

 

Contact for information:

Ananda S, K. M.L.I.Sc, M.Phil, K-SET 

Librarian, EMPRI

E-Mail ID: library-empri@karnataka.gov.in

×
ABOUT DULT ORGANISATIONAL STRUCTURE PROJECTS