ಅಭಿಪ್ರಾಯ / ಸಲಹೆಗಳು

ಕೆರೆ ಸಂರಕ್ಷಣಾ ಕೇಂದ್ರ

ಕೆರೆ ಸಂರಕ್ಷಣಾ ಕೇಂದ್ರ

  ಕೆರೆಗಳು ಪರಿಸರದ ಅಮೂಲ್ಯಜಲರಾಶಿಗಳು. ಈ ಅಮೂಲ್ಯ ಸಾಂಪ್ರದಾಯಿಕ ಜಲರಾಶಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದೆ. ನಗರಾಭಿವೃದ್ಧಿ ಮತ್ತು ಕೈಗಾರಿಕೆಯಿಂದ, ಒತ್ತುವರಿ ಮತ್ತು ಇತರೆ ಕಾರಣಗಳಿಂದ ಬಹುಪಾಲು ಕೆರೆಗಳು ಆರಂಭದ ಅಸ್ಥಿತ್ವವನ್ನು ಕಳೆದುಕೊಂಡಿರುತ್ತವೆ. ಕೆರೆಗಳನ್ನು ಪುನಶ್ಚೆತನಕ್ಕೆ ತರುವುದು ಒಂದು ಸವಾಲಿನ ಕಾರ್ಯವಾಗಿರುತ್ತದೆ. ಈ ಕೇಂದ್ರವು ರಾಜ್ಯದಲ್ಲಿನ ಜಲರಾಶಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಿರ್ವಹಣೆಯಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳುತ್ತಿದೆ. ಜಲರಾಶಿಗಳ ಸುಧಾರಣೆಗಾಗಿ ಸಂರಕ್ಷಣೆ ಮತ್ತು ನಿರ್ವಹಣೆಗಳ ಕ್ರಿಯಾಯೋಜನೆಗಳನ್ನು ನಿರ್ಮಿಸುವುದಕ್ಕೆ ಪಾಲುದಾರರ ಮತ್ತು ನೀತಿದಾರರ ನಡುವೆ ಸಂಪರ್ಕ ಸೇತುವೆಯನ್ನು ಕಲ್ಪಿಸುವ ಕಾರ್ಯವನ್ನು ಸಹಾ ಕೇಂದ್ರವು ಮಾಡುತ್ತಿದೆ. ಕೆರೆ ಸಂರಕ್ಷಣಾ ಕೇಂದ್ರವು ಇಲ್ಲಿವರೆಗೆ ಐದು ಅಧ್ಯಯನವನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಒಂದು ಅಧ್ಯಯನವು ಪ್ರಗತಿಯಲ್ಲಿದೆ. ಈ ವಿವರಗಳನ್ನು ಕೆಳಗೆ ನೀಡಲಾಗಿದೆ.
 

ಇಲ್ಲಿವರೆಗೆ ಪೂರ್ಣಗೊಂಡ ಅಧ್ಯಯನಗಳು:
 
1. ಕೆರೆಗಳ ಸಂರಕ್ಷಣೆಗಾಗಿ ನಿರ್ಧರಿಸಿದ ಕಾರ್ಯತಂತ್ರಗಳ ಅಧ್ಯಯನ - ಹಂತ-೧.
2. ಬೆಂಗಳೂರು ಜಲ ಸಂರಕ್ಷಣಾಯೋಜನೆ- ನೀರು ಸರಬರಾಜು ಒಂದು ಗುಣಾತ್ಮಕಮಾರ್ಗ.
3. ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಸಂರಕ್ಷಣೆ ಕುರಿತು ಅಧ್ಯಯನ.
4. ಮೈಸೂರು-ನಂಜನಗೂಡು ಸ್ಥಳಿಯ ಯೋಜನಾ ಪ್ರದೇಶದಲ್ಲಿನ ಕೆರೆಗಳ ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳ ಕುರಿತಾಗಿ ಅಧ್ಯಯನ.
5. ಬೆಂಗಳೂರು ಮಾಹಾನಗರ ಪ್ರದೇಶದಲ್ಲಿ ಜಲರಾಶಿಗಳನ್ನು (ಕೆರೆ, ಕಟ್ಟೆ ಮತ್ತು ಕುಂಟೆ)  ಕುರಿತಾಗಿ ಅಧ್ಯಯನ. 
 

ಪ್ರಗತಿಯಲ್ಲಿರುವ ಅಧ್ಯಯನ:
 
  • ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶದಲ್ಲಿನ ಜಲರಾಶಿಗಳ (ಕೆರೆ, ಕಟ್ಟೆ ಮತ್ತು ಕುಂಟೆ) ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸುವುದರ ಕುರಿತು ಅಧ್ಯಯನ.

       1         2

ಇತ್ತೀಚಿನ ನವೀಕರಣ​ : 09-07-2019 12:20 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080