ಅಭಿಪ್ರಾಯ / ಸಲಹೆಗಳು

ಹವಾಮಾನ ಬದಲಾವಣೆಯ ಕೇಂದ್ರ

ಹವಾಮಾನ ಬದಲಾವಣೆಯ ಕೇಂದ್ರ

ಜಾಗತಿಕ ಹವಾಮಾನ ಬದಲಾವಣೆಯ ದುರಂತದ ಸಮಸ್ಯೆಯನ್ನು ಗುರುತಿಸಿ, ಸಂಸ್ಥೆಯು ಹವಾಮಾನ ಬದಲಾವಣೆ ಕೇಂದ್ರವನ್ನು ಸ್ಥಾಪಿಸಿತು, ಇದು ಹವಾಗುಣದ ಬದಲಾವಣೆಗೆ ಸಂಬಂಧಿಸಿದ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ ಆರ್ಥಿಕ ಮಾಹಿತಿಯನ್ನು ಸಮಗ್ರ, ವಸ್ತುನಿಷ್ಠ, ಮುಕ್ತ ಮತ್ತು ಪಾರದರ್ಶಕ ಆಧಾರದ ಮೇಲೆ ಅದರ ಸಂಭಾವ್ಯ ಪರಿಣಾಮ, ಹೊಂದಾಣಿಕೆ ಮತ್ತು ಉಪಶಮನ ಕ್ರಮಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ. ಕರ್ನಾಟಕ ಸರ್ಕಾರವು ಒಪ್ಪಿಸಿದಂತೆ, ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕಾರ್ಯ ಯೋಜನೆ (SAPCC) 1ನೇ ಮೌಲ್ಯಮಾಪನವನ್ನು ಸಿದ್ಧಪಡಿಸುವ ಕಾರ್ಯವನ್ನು ಸಂಸ್ಥೆಯು ಕೈಗೊಂಡಿದೆ. KSAPCC ಯ ವಿವಿಧ ಸವಾಲುಗಳನ್ನು ವಿವರಿಸಿದೆ ಮತ್ತು ರಾಜ್ಯದಲ್ಲಿ ಆಡಳಿತದ ವಿವಿಧ ಕ್ಷೇತ್ರಗಳಿಂದ ಜಾರಿಗೆ ತರಬಹುದಾದ ಕಾರ್ಯಸಾಧ್ಯವಾದ ಕಾರ್ಯಸೂಚಿಯನ್ನು ನೀಡಿದೆ.

 

ಕರ್ನಾಟಕದ ಹವಾಮಾನ ಬದಲಾವಣೆಗಳಿಗೆ ರಾಜ್ಯ ನೋಡಲ್ ಏಜೆನ್ಸಿಯಾಗಿ ಎಂಪ್ರಿ ಸಂಸ್ಥೆಯನ್ನು ನೇಮಿಸಲಾಗಿದೆ. ಸಾರ್ವತ್ರಿಕ ವೇದಿಕೆಯೊಂದರಲ್ಲಿ ಪ್ರತಿಯೊಂದು ಮೂಲೆ ಮತ್ತು ರಾಜ್ಯದ ಮೂಲೆಗಳಲ್ಲಿ ಎಲ್ಲಾ ಹವಾಮಾನ ಸಂಬಂಧಿತ ಜ್ಞಾನವನ್ನು ಆಧಾರವಾಗಿರಿಸುವುದು ಅವಶ್ಯಕ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಕೈಗೊಳ್ಳಲು ಅನುಗುಣವಾದ ಪಾಲುದಾರಿಕೆಯನ್ನು ಸುಲಭಗೊಳಿಸಲು ಸಹಾಯ ಮಾಡುವ ಹವಾಮಾನದ ಹೊಂದಾಣಿಕೆಯ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳಲು ಜ್ಞಾನ ಉತ್ಪನ್ನಗಳು, ಮಾಹಿತಿ ಮತ್ತು ದತ್ತಾಂಶವನ್ನು ಬಳಸಲು ಇದು ಲಭ್ಯವಾಗುವಂತೆ ಮಾಡುತ್ತದೆ. ಕರ್ನಾಟಕ ಸರ್ಕಾರವು ಸಂಸ್ಥೆಯ ಸಾಮಥ್ರ್ಯವನ್ನು ನೋಡಲ್ ಏಜೆನ್ಸಿಯಾಗಿ ಬಲಪಡಿಸಲು ಹವಾಮಾನ ಬದಲಾವಣೆಯಲ್ಲಿ ಹೊಸ ಯೋಜನೆಯನ್ನು ಅನುಮೋದಿಸಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಂತ್ರಾಲಯವು ಹವಾಮಾನ ಬದಲಾವಣೆ ಘಟಕವನ್ನು ಸಂಸ್ಥೆಯಲ್ಲಿ ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ SAPCC ಯ ಅನುಷ್ಠಾನಕ್ಕಾಗಿ ಅನುದಾನವನ್ನು ಒದಗಿಸಿದೆ.

 

ಹವಾಮಾನ ಬದಲಾವಣೆಯ ದೀರ್ಘಾವಧಿ ಸಮಸ್ಯೆಯ ದೃಷ್ಟಿಯಿಂದ, ವಿಶಾಲ ವ್ಯಾಪ್ತಿ ಮತ್ತು ಆಯಾಮಗಳ ಉದ್ದೇಶಿತ ಮತ್ತು ಕಾರ್ಯತಂತ್ರದ ರೀತಿಯಲ್ಲಿ ಸಾಮಥ್ರ್ಯ-ನಿರ್ಮಾಣ ಮಧ್ಯಸ್ಥಿಕೆಗಳ ವೈವಿಧ್ಯಮಯ ಬಂಡವಾಳವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. 2016 ರಲ್ಲಿ ಕರ್ನಾಟಕ ರಾಜ್ಯ ಕಾರ್ಯತಂತ್ರದ ಜ್ಞಾನ ಕೇಂದ್ರಕ್ಕೆ ಹವಾಮಾನ ಬದಲಾವಣೆಯ ಕೇಂದ್ರವನ್ನು ಬಲಪಡಿಸಲಾಗಿದೆ. ರಾಜ್ಯ ಜ್ಞಾನ ಕೇಂದ್ರದ ಉದ್ದೇಶವು (NMSKCC), ಹವಾಮಾನ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಮಟ್ಟದಲ್ಲಿ ಸಾಮಥ್ರ್ಯವನ್ನು ಬಲಪಡಿಸುವುದು ಮತ್ತು ನೀತಿ ಬದಲಾವಣೆ, ವಿವಿಧ ಕ್ಷೇತ್ರಗಳಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಕಡ್ಡಾಯವನ್ನು ಸಂಯೋಜಿಸುವುದಾಗಿದೆ. ಹವಾಮಾನ ಬದಲಾವಣೆಗಳಿಗೆ ಕರ್ನಾಟಕ ತಂತ್ರದ ಜ್ಞಾನ ಕೇಂದ್ರದಲ್ಲಿನ ಪ್ರಮುಖ ಚಟುವಟಿಕೆಗಳು ಇಂತಿವೆ:

 •  ಹವಾಮಾನ ಬದಲಾವಣೆಯ ಕುರಿತಾದ ದೀರ್ಘಕಾಲೀನ ಮೇಲ್ವಿಚಾರಣಾ ಅಧ್ಯಯನದ ಶಾಶ್ವತ ಸಂರಕ್ಷಣಾ ಸ್ಥಳಗಳನ್ನು (ಪಿಪಿಪಿ) ಸ್ಥಾಪಿಸುವುದು.
 • ಹವಾಮಾನ ಬದಲಾವಣೆ ಕುರಿತ ಸಂಶೋಧನಾ ಅಧ್ಯಯನಗಳಿಗಾಗಿ ಉಪಯುಕ್ತ ಪ್ರಯೋಗಾಲಯಗಳ ಸ್ಥಾಪನೆ.
 • ಕರ್ನಾಟಕ ರಾಜ್ಯದ ಹವಾಮಾನ ಬದಲಾವಣೆಯ ಕುರಿತಾದ ಮಾಹಿತಿಯನ್ನು ಪ್ರಸಾರ ಮಾಡಲು ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕಾರ್ಯತಂತ್ರದ ಜ್ಞಾನ ಪೋರ್ಟಲ್‍ನ ಅಭಿವೃದ್ಧಿಪಡಿಸುವುದು

ಪೂರ್ಣಗೊಂಡಿರುವ ಯೋಜನೆಗಳು:

 1.  ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗಿನ ಸಹಯೋಗದೊಂದಿಗೆ “ಕರ್ನಾಟಕದ ಮಣ್ಣಿನಲ್ಲಿರುವ ಇಂಗಾಲ ಶೇಖರಣೆ” ಬಗ್ಗೆ ಅಧ್ಯಯನ.
 2. ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗಿನ ಸಹಯೋಗದೊಂದಿಗೆ “ಹವಾಮಾನ ಬದಲಾವಣೆಯ ಹಿನ್ನಲೆಯಲ್ಲಿ ಹಲ್ಲಿಗಳ (ಓತಿಕ್ಯಾತ, ಹೆಂಟೆಗೊದ್ದ, ಇತ್ಯಾದಿ) ಮೇಲೆ ನಗರೀಕರಣದ ಪ್ರಭಾವ” ದ ಬಗ್ಗೆ ಅಧ್ಯಯನ.
 3. ದಕ್ಷಿಣ ಫೌಂಡೇಶನ್ ಸಂಸ್ಥೆಯ ಸಹಯೋಗೊಂದಿಗೆ “ಕರ್ನಾಟಕದ ಕರಾವಳಿಯಲ್ಲಿ ಸಮುದ್ರ ಆಮೆಗಳ ಗೂಡು ಪ್ರದೇಶಗಳ ನಿಗಾ ಇಡುವಿಕೆ ಹಾಗೂ ನಕ್ಷೆ ತಯಾರಿಕೆ” ಯ ಬಗ್ಗೆ ಅಧ್ಯಯನ.
 4. ಎಟ್ರೀ ಸಂಸ್ಥೆಯ ಸಹಯೋಗದೊಂದಿಗೆ “ಹವಾಮಾನ ಬದಲಾವಣೆ -ನಗರೀಕರಣ ಮತ್ತು ಕರ್ನಾಟಕದ ಗೃಹ ವಲಯ”ದ ಬಗ್ಗೆ ಅಧ್ಯಯನ.
 5. ಅರಣ್ಯ ಹವಾಮಾನ ಬದಲಾವಣೆ ಸೇವೆಗಳ ಖಾಸಗಿ ನಿಯಮಿತ, ಬೆಂಗಳೂರು ಇವರ ಸಹಯೋಗದಲ್ಲಿ “ಹವಾಮಾನ ಬದಲಾವಣೆ ತಡೆಗಟ್ಟುವಿಕೆ ಮತ್ತು ಹೊಂದಾಣಿಕೆ ತಂತ್ರ ಸೂತ್ರವಾಗಿ ಅರಣ್ಯ ಕೃಷಿ” ಎಂಬುದರ ಬಗ್ಗೆ ಅಧ್ಯಯನ.
 6. ಬೆಂಗಳೂರಿನ ಸುತ್ತಮುತ್ತಲಿರುವ ಪೆರಿ ನಗರ ಪ್ರದೇಶಗಳಲ್ಲಿ ಹವಾಮಾನ ಭದ್ರತೆ ಮತ್ತು ನಗರೀಕರಣದ ಎರಡು ಅನ್ಯಾಯಗಳನ್ನು ಅಂದಾಜು ಮಾಡುವುದು - ಸಾರ್ವಜನಿಕ ವ್ಯವಹಾರ ಕೇಂದ್ರ, ಬೆಂಗಳೂರು
 7. ಎಂಪ್ರಿ ಸಂಸ್ಥೆಯಿಂದ “ಚಿಟ್ಟೆ, ಪತಂಗಗಳು ಹವಾಮಾನ ಬದಲಾವಣೆಯ ಸೂಚಕಗಳು- ಬೆಂಗಳೂರು ನಗರದಲ್ಲಿ ಒಂದು ಅಧ್ಯಯನ”
 8. ಎಂಪ್ರಿ ಸಂಸ್ಥೆಯಿಂದ “ಘನತ್ಯಾಜ್ಯ ಸಂಗ್ರಹಣಾ ಸ್ಥಳಗಳಲ್ಲಿ ಹಸಿರು ಮನೆ ಅನಿಲಗಳ ಅಳೆಯುವಿಕೆ” ಬಗ್ಗೆ ಅಧ್ಯಯನ.
 9. ಎಂಪ್ರಿ ಸಂಸ್ಥೆಯಿಂದ, “ಹವಾಮಾನ ಬದಲಾವಣೆಯಿಂದಾಗಿ ಬೆಂಗಳೂರು ನಗರದಲ್ಲಿ ಸೊಳ್ಳೆಗಳ ಮುಖಾಂತರ ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ಇದರ ದುರ್ಬಲತೆ ನಕ್ಷೆಯ ರಚನೆ” ಯ ಬಗ್ಗೆ ಅಧ್ಯಯನ.
 10. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ (Foundation for Revitalisation of Local Health Traditions) ಸಹಯೋಗದೊಂದಿಗೆ, ಜಾಗತಿಕ ಹವಾಗುಣ ಬದಲಾವಣೆ ಮತ್ತು ಅರಣ್ಯ ಸಂಪನ್ಮೂಲಗಳು: ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರ ಬಳಕೆಗಾಗಿ ಕನ್ನಡದಲ್ಲಿ ಪರಿಸರ ಸಾಹಿತ್ಯ ತಯಾರಿಸುವುದು- ಡಾ. ಬಿ.ಎಸ್. ಸೋಮಶೇಖರ್, FRLHT
 11. ಸಾಮಾಜಿಕ – ಆರ್ಥಿಕ ಬದಲಾವಣೆ ಸಂಸ್ಥೆಯ (Institute for Social & Economic Change-ISEC) ಸಹಯೋಗದೊಂದಿಗೆ, ಹವಾಗುಣ ಬದಲಾವಣೆಯ ಕಾರಣ ಕರ್ನಾಟಕದ ದುರ್ಬಲ ವರ್ಗಗಳ ಮೇಲೆ, ವಿಶೇಷವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಉಂಟಾದ ಪರಿಣಾಮಗಳು ಮತ್ತು ಅವುಗಳ ನಿವಾರಣೆಗೆ ಅಳವಡಿಸಬೇಕಾದ ತಂತ್ರಗಳು – ಡಾ. ಎಂ. ಬಾಲಸುಬ್ರಮಣಿಯನ್, ISEC
 12. ಶಕ್ತಿ ಮತ್ತು ಸಂಪನ್ಮೂಲಗಳ ಸಂಸ್ಥೆ (The Energy & Resources Institute – TERI) ಸಹಯೋಗದೊಂದಿಗೆ, ನಗರ ಪ್ರದೇಶದಲ್ಲಿ ತಾಪಮಾನ ಹೆಚ್ಚುವಿಕೆಯ ಪರಿಣಾಮವನ್ನು ಕಡಿಮೆ ಮಾಡಲು, ನಗರ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತ ಸಂಶೋಧನಾ ಅಧ್ಯಯನ – ಡಾ. ಮಿನ್ನಿ ಶಾಸ್ತ್ರಿ, TERI.
 13. ಮೆಟ್ರೋ ರೈಲ್ ವ್ಯವಸ್ಥೆಯನ್ನು ಹವಾಗುಣ ಬದಲಾವಣೆಯ ಉಪಶಮನ ಕ್ರಿಯಾತಂತ್ರ ವಿಧಾನವಾಗಿ ನಿರ್ದರಣೆಯ ಬಗ್ಗೆ ಅಧ್ಯಯನ.

ಚಾಲ್ತಿಯಲ್ಲಿರುವ ಯೋಜನೆಗಳು :

 1. ಚಿಟ್ಟೆ, ಪತಂಗಗಳು ಹವಾಗುಣ ಬದಲಾವಣೆಯ ಸೂಚಕಗಳು ಕುರಿತು ಕರ್ನಾಟಕದ ವಿವಿಧ ಪರಿಸರ ಹವಾಗುಣ ಪ್ರದೇಶಗಳಲ್ಲಿ ಒಂದು ಅಧ್ಯಯನ.
 2. ಕರ್ನಾಟಕದಲ್ಲಿ ಹವಾಮಾನ ಬದಲಾವಣೆ ಪರಿಣಾಮದಿಂದಾಗಿ ನೀರಿನ ಮುಖಾಂತರ ಹರಡುವ ರೋಗ ಮತ್ತು ಇದರ ದುರ್ಬಲತೆಯ ನಕ್ಷೆ ರಚನೆಯ ಬಗ್ಗೆÉ ಒಂದು ಅಧ್ಯಯನ.
 3. ಡಿಎಸ್ಟಿ ಯೋಜನೆ: ಕರ್ನಾಟಕ ರಾಜ್ಯದಲ್ಲಿ ಹವಾಗುಣ ಬದಲಾವಣೆ (ಎನ್ಎಂಎಸ್ಕೆಸಿಸಿ) ಯೋಜನೆಗೆ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ರಾಜ್ಯ ಹವಾಗುಣ ಬದಲಾವಣೆ ಕೇಂದ್ರದ/ಕೋಶದ ಸ್ಥಾಪನೆ/ಬಲವರ್ಧನೆ.

ಇತ್ತೀಚಿನ ನವೀಕರಣ​ : 27-06-2019 03:43 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080