ಅಭಿಪ್ರಾಯ / ಸಲಹೆಗಳು

​​​​​​​​​​​​​​​​​​​ಸಾಮರ್ಥ್ಯ ಬಲವರ್ಧನೆ ಕೇಂದ್ರ

 

 ತ್ಯಾಜ್ಯ ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕ ವಸತಿ ಸಹಿತ ತರಬೇತಿ ಕಾರ್ಯಕ್ರಮ

 

ಅಪ್ಲಿಕೇಶನ್ ಫಾರಂ   ಇಲ್ಲಿ ಕ್ಲಿಕ್ ಮಾಡಿ

 

ಸಾಮರ್ಥ್ಯ ಬಲವರ್ಧನೆ :

 

“ವ್ಯಕ್ತಿಯ ಜ್ಞಾನ,ಸಾಮರ್ಥ್ಯ,ಕೌಶಲ್ಯ ಮತ್ತು ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಸಾಂಸ್ಥಿಕ ರಚನೆಗಳನ್ನು ಸುಧಾರಿಸುತ್ತವೆ ಮತ್ತು ಈ ಪ್ರಕ್ರಿಯೆಯು ಸಂಸ್ಥೆಯು  ಸಮರ್ಥವಾಗಿ ತನ್ನ ಗುರಿ ಮತ್ತು ಉದೇಶಗಳನ್ನು ಸುಸ್ಥಿರ ರೀತಿಯಲ್ಲಿ ಪೂರೈಸಲು ಸಹಕಾರಿಯಾಗಿದೆ” ಎಂದು ಗುರುತಿಸಲಾಗಿದೆ.ಆದಾಗ್ಯೂ ಸಮಯದಾಯದ ಸಾಮರ್ಥ್ಯ ಬಲವರ್ಧನೆಗೆ ತತ್ವಗಳನ್ನು ಗಣನೆಗೆ ತೆಗೆದುಕೊಳ್ಳುವುದು ಪ್ರಮುಖವಾಗಿದೆ.

"ಜ್ಞಾನ, ಸಾಮರ್ಥ್ಯಗಳು, ಕೌಶಲ್ಯಗಳು ಮತ್ತು ವ್ಯಕ್ತಿಗಳ ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಮತ್ತು ಸಂಸ್ಥೆಯು ಸಾಂಸ್ಥಿಕ ರಚನೆಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಮುದಾಯ ಸಾಮರ್ಥ್ಯದ ಬಲವರ್ಧನೆಯನ್ನು ನಿಯಂತ್ರಿಸುವ ತತ್ವಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ.

 ಸಾಮರ್ಥ್ಯ ಬಲವರ್ಧನೆ ಕೇಂದ್ರವು ಎಂಪ್ರಿ ಸಂಸ್ಥೆಯಲ್ಲಿ ಪ್ರಮುಖ ಅಂಗವಾಗಿದ್ದು, ಸಂಸ್ಥೆಯು  ಪ್ರಸಕ್ತ ಸನ್ನಿವೇಶದಲ್ಲಿ ಪ್ರಸ್ತುತವೆನಿಸುವ ಪರಿಸರ ಸಂಬಂಧಿ ವಿಷಯಗಳ ಕುರಿತು  ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸ್ತಿಶಕ್ತಿ ಸ್ವಸಹಾಯ ಸಂಘಗಳಿಗೆ ಮತ್ತು ಜನ ಸಾಮಾನ್ಯರಿಗೆ ಅತ್ಯಗತ್ಯವಾದ ತರಬೇತಿ/ಕಾರ್ಯಾಗಾರಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು ಬಂದಿರುತ್ತದೆ. ಅದರಂತೆ ಸಂಸ್ಥೆಯು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ; ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ; ಕರಾವಳಿ ನಿಯಂತ್ರಣ ವಲಯ;  ಘನತ್ಯಾಜ್ಯ ನಿರ್ವಹಣೆ; ಮಳೆ ನೀರು ಕೊಯ್ಲು; ವಿದ್ಯುನ್ಮಾನ ತ್ಯಾಜ್ಯ ನಿರ್ವಹಣೆ; ಸುಸ್ಥಿರ ಪರಿಸರ ನಿರ್ವಹಣೆ; ನಗರಾಡಳಿತ,  ಬೆಂಗಳೂರು ಬಗ್ಗೆ ತರಬೇತಿ/ಕಾರ್ಯಾಗಾರಗಳನ್ನು ಆಯೋಜಿಸಿರುತ್ತದೆ. ಹಾಗೆಯೇ ಆಡಳಿತ, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಸಾಮರ್ಥ್ಯ ಬಲವರ್ಧನೆಗಾಗಿ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುತ್ತದೆ. 

ಎಂಪ್ರಿ ಸಂಸ್ಥೆಯು ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೆತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಖ್ಯಾತ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ತನ್ನ ಕಾರ್ಯವ್ಯಾಪ್ತಿಯ ಪ್ರಕ್ರಿಯೆಯನ್ನು ವಿಸ್ತರಿಸಿಕೊಂಡಿದೆ. 

 

ಪೂರ್ಣಗೊಂಡ ತರಬೇತಿ ಕಾರ್ಯಕ್ರಮಗಳು: 

 

ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ಪ್ರಾಯೋಜಕತ್ವದೊಂದಿಗೆ ವಿವಿಧ ರಾಜ್ಯಗಳ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳಿಗೆ “ಹವಾಗುಣ ಬದಲಾವಣೆ ಹಿನ್ನಲೆಯಲ್ಲಿ  ಚೇತರಿಸಿಕೊಳ್ಳುವ ಕಾಡುಗಳ ಸ್ಥಾಪ ಕುರಿತ ತರಬೇತಿ ಕಾರ್ಯಾಗಾರ; 
 
                                 IFS

ಇತ್ತೀಚಿನ ನವೀಕರಣ​ : 22-02-2021 03:45 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080