-
ಮಹಾ ನಿರ್ದೇಶಕರ ಸಂದೇಶ

 

ಮಹಾ ನಿರ್ದೇಶಕರ ಮೇಜಿನಿಂದ ಸಂದೇಶ

 

ಎರಡು ದಶಕದ ಹಿಂದೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಯ ಉಗಮವಾದಾಗಿನಿಂದಲೂ ಸುಸ್ಥಿರ ಅಭಿವೃದ್ಧಿ ಮತ್ತು ನೈಸರ್ಗಿಕ ಪರಿಸರದ ಸ್ಥಿತಿಗತಿಯು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರವಾಗಿದೆ. ಸರ್ಕಾರದ ಎಲ್ಲಾ ಹಂತಗಳಲ್ಲಿ ಅಂದರೆ, ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಖನಿಜ, ಅರಣ್ಯ, ಜೀವ ವೈವಿಧ್ಯತೆಯ ಸ್ಥಿತಿಗತಿಯ ಕುರಿತಂತೆ ಕಾಳಜಿ ವಹಿಸಲಾಗುತ್ತಿದೆ. ಹಾಗೆಯೇ ನಾಗರಿಕ ಸಮಾಜವು ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಯುತ ನಡವಳಿಕೆಯನ್ನು ಬಯಸುತ್ತಿದ್ದು, ಕಂಪನಿಗಳು/ ಸಂಸ್ಥೆಗಳು ತಮ್ಮ ಆಯವ್ಯಯ ಪಟ್ಟಿಯಲ್ಲಿ ಅವುಗಳನ್ನು ದಾಖಲಿಸಲು ಕ್ರಮಗಳನ್ನು ವಹಿಸುತ್ತಿವೆ. ಇದರ ಪರಿಣಾಮವಾಗಿ ಪರಿಸರಕ್ಕೆ ಅನುರೂಪವಾದ ಅಭಿವೃದ್ಧಿ ಕಾರ್ಯಗಳಿಗೆ ಆಡಳಿತ ಪ್ರಕ್ರಿಯೆಯನ್ನು ನಿರಂತರವಾಗಿ ಜೋಡಿಸಲಾಗುತ್ತಿದೆ. ಸರ್ಕಾರದಲ್ಲಿ, ಪರಿಸರಕ್ಕೆ ಅನುರೂಪವಾದ ಅಭಿವೃದ್ಧಿ ಕಾರ್ಯಗಳಿಗೆ ನೀತಿ-ಪ್ರಕ್ರಿಯೆಯ ಕ್ರಮವಾಗಿ ಆಯವ್ಯಯದಲ್ಲಿ ಸಂಪನ್ಮೂಲ ಹಂಚಿಕೆಯನ್ನು ಮಾಡಲಾಗುತ್ತಿದೆ.

 

ನಾವೆಲ್ಲರೂ ಸಾಮಾನ್ಯವಾಗಿ ಬಳಸುವ ನೈಸರ್ಗಿಕ ಪರಿಸರವು ಉತ್ತಮ ಸಂಪನ್ಮೂಲವಾಗಿದ್ದು, ಇವುಗಳ ಅಳಿಯುವಿಕೆಯು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯ ಮತ್ತು ಪಾಲುದಾರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಗಳೆರಡೂ ಪರಿಸರದ ಒಳಿತಿನ ಮೇಲೆ ಅವಲಂಬಿತವಾಗಿದೆ. ಇದಲ್ಲದೇ, ನಾವಿಂದು ಹಲವಾರು ಬಗೆಯ ಪರಿಸರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ನಾವು ಈಗ ಅನುಸರಿಸುವ ಸಮರ್ಪಕವಾದ ಅಭಿವೃದ್ಧಿ ಮಾರ್ಗದ ಮೇಲೆ “ಭೂ ವ್ಯವಸ್ಥೆಗಳ ಸುಸ್ಥಿರತೆ”ಯು ಅವಲಂಬಿತವಾಗಿರುವ ಕಾರಣದಿಂದ ಈ ದಶಕವನ್ನು ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂಬುದಾಗಿ ಒಮ್ಮತಾಭಿಪ್ರಾಯದಿಂದ ಪರಿಗಣಿಸಲಾಗಿದೆ.

 

ಈ ಮೇಲಿನ ಸನ್ನಿವೇಶದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿಗಳನ್ನು ರೂಪಿಸುವ ಬದ್ಧತೆಯನ್ನು ಇನ್ನಷ್ಟು ಗಾಢವಾಗಿಸುತ್ತಾ, ಮೂರನೇ ದಶಕದತ್ತ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ತನ್ನ ಹೆಜ್ಜೆಯನ್ನು ಇಟ್ಟಿದೆ. ಸುಸ್ಥಿರ ಅಭಿವೃದ್ಧಿಗಾಗಿ ಪರಿಣಾಮವನ್ನು ಬೀರುವ ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನ, ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣ, ಮೂಲ ಮಾಹಿತಿಯನ್ನು ಕಲೆಹಾಕುವ ಸಾಮರ್ಥ್ಯ ಮೊದಲಿಗಿಂತಲೂ ವೃದ್ಧಿಗೊಂಡಿದೆ. ಸಂಶೋಧನೆಯ ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಾಮರ್ಥ್ಯ ಹಂಚಿಕೆಯನ್ನು ಮನಗಾಣಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳೊಂದಿಗೆ ನೂತನ ಸಹಭಾಗಿತ್ವವನ್ನು ‍ಸ್ಥಾಪಿಸಲಾಗಿದೆ. ಪರಿಸರ ಮೇಲ್ವಿಚಾರಣೆಯಲ್ಲಿ ತಾಪಮಾನ ಏರಿಕೆ ನಿಯಂತ್ರಣಕ್ಕೆ ಪ್ರಮುಖವಾಗಿ ಗಮನವನ್ನು ಕೇಂದ್ರೀಕರಿಸಲಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಯು ಕೈಗೊಂಡ ಅನ್ವಯಿಕ ಸಂಶೋಧನೆಯು ಪ್ರಚಾರ, ತರಬೇತಿ ಮತ್ತು ನೀತಿ ಅಭಿವೃ‍ದ್ಧಿ ಯೋಜನೆಗಳನ್ನು ಒದಗಿಸುತ್ತಿದೆ.

 

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ವರ್ಷದಂದು, ಸಮಕಾಲೀನ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಶ್ರೇಷ್ಠತೆಯ ಕೇಂದ್ರವಾಗುವ ಗುರಿಯತ್ತ ನಾವು ಮುಂದಡಿ ಇಡುತ್ತಿದ್ದೇವೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಯ ಸಾಧನೆಗಳಿಗಾಗಿ ನಾನು ಪ್ರತಿಯೊಬ್ಬ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಅವರ ಕೊಡುಗೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲಾ ಹಂತದಲ್ಲಿ ಕರ್ನಾಟಕ ಸರ್ಕಾರದಿಂದ ದೊರೆತ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಇಂದಿನ ಈ ಸ್ಥಿತಿಯನ್ನು ತಲುಪಲು ಸಾಧ್ಯವಾಗಿದೆ. ಈ ಬೆಂಬಲವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ. 

 

ಸರ್ಕಾರದ ಕೆಲಸ ದೇವರ ಕೆಲಸ!

 

×
ABOUT DULT ORGANISATIONAL STRUCTURE PROJECTS